ಉಪ್ಪಳ: ಸ್ವತಂತ್ರ ಕರ್ಷಕ ಸಂಘ ಸದಸ್ಯತನದ ಆಧಾರದಲ್ಲಿ ಮಂಜೇಶ್ವರ ವಿಧಾನಸಭಾ ಮಂಡಲ ಸಮಿತಿಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಉಪ್ಪಳ ಸಿ.ಎಚ್.ಸೌಧದಲ್ಲಿ ನಡೆದ ಕೌನ್ಸಿಲ್ ಸಭೆಯನ್ನು ಜಿಲ್ಲಾ ಅಧ್ಯಕ್ಷ ಅಬ್ದುಲ್ ಕುಞ ಹಾಜಿ ಉದ್ಘಾಟಿಸಿದರು. ಸಿ.ಎಚ್.ಅಬ್ದುಲ್ ಹಮೀದ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕೆ, ಪ್ರ.ಕಾರ್ಯದರ್ಶಿ ಎ.ಕೆ.ಆರೀಫ್, ಪದಾಧಿಕಾರಿಗಳಾದ ಅಂದುಞ ಹಾಜಿ ಚಿಪ್ಪಾರು, ಎ.ಕೆ.ಶರೀಫ್ ಪೆರ್ಲ, ಬಿ.ಎ.ಅಬ್ದುಲ್ ಮಜೀದ್, ಅಬ್ದುಲ್ಲ ಕಜೆ ಮೊದಲಾದವರು ಮಾತನಾಡಿದರು.ಹಸನ್ ನೆಕ್ಕರೆ ನಿಯಂತ್ರಿಸಿದರು. ನೂತನ ಪದಾಧಿಕಾರಿಗಳಾಗಿ ಖಲೀಲ್ ಮರಿಕ್ಕೆ(ಅಧ್ಯಕ್ಷ), ಅಲಿ.ಎ.ಖಾದರ್ ಆನೆಕಲ್ಲು (ಪ್ರ.ಕಾರ್ಯದರ್ಶಿ), ಟಿ.ಎಂ.ಹಮೀದಾಲಿ ಖಂದಲ್(ಕೋಶಾಧಿಕಾರಿ), ಎ.ಕೆ.ಅಲಿ ಮಾಸ್ಟರ್, ಮುಹಮ್ಮದ್ ಬದ್ರಿಯಾ ನಗರ್, ಇಬ್ರಾಹಿಂ ಹಾಜಿ ಮಂಜೇಶ್ವರ (ಉಪಾಧ್ಯಕ್ಷರು), ಸಿ.ಎಚ್.ಅಬ್ದುಲ್ ರಹಿಮಾನ್ ಮುಗು, ಅಬ್ದುಲ್ಲ ಚಳಿಯಂಗೋಡು (ಕಾರ್ಯದರ್ಶಿಗಳು) ಎಂಬಿವರನ್ನು ಆರಿಸಲಾಯಿತು
