ಉಪ್ಪಳ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಒಳಪಡದ ಮಂಜೇಶ್ವರ ಕ್ಷೇತ್ರದ ವರ್ಕಾಡಿ ಗ್ರಾಮ ಪಂಚಾಯತ್ ಕ್ರೀಡಾಂಗಣದ ಅಭಿವೃದ್ಧಿಗೆ ಒಂದು ಕೋಟಿ ರೂ.ಗಳ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ. ವರ್ಕಾಡಿ ಪಂಚಾಯತಿನ ಧರ್ಮನಗರದಲ್ಲಿ ಇರುವ ಪಂಚಾಯಿತಿ ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕ್ರೀಡಾಂಗಣ ಅಭಿವೃದ್ಧಿಗೆ ಯೋಜನೆ ರೂಪಿಸಿ ಬಜೆಟ್‌ನಲ್ಲಿ ಸೇರಿಸಿ ಗ್ರಾಮೀಣ ಭಾಗದಲ್ಲಿ ಉತ್ತಮ ಆಟದ ಮೈದಾನವನ್ನು ಸಿದ್ಧಪಡಿಸಲು ಶಾಸಕ ಎ.ಕೆ.ಎಂ.ಅಶ್ರಫ್ ಪ್ರಸ್ತಾವನೆ ಸಲ್ಲಿಸಿದ್ದರು. ಕ್ರೀಡಾಂಗಣ ಅಭಿವೃದ್ಧಿ ಯೋಜನೆಯು ಮೈದಾನದ ಅಭಿವೃದ್ಧಿ, ಗ್ಯಾಲರಿ, ವೇದಿಕೆ, ಶುಚಿತ್ವ ವ್ಯವಸ್ಥೆ, ಕಚೇರಿ ಸೌಲಭ್ಯ, ತಡೆಗೋಡೆ, ಸುತ್ತುಗೋಡೆ, ಪ್ರವೇಶ ದ್ವಾರ, ಬೋರ್‌ವೆಲ್, ಕ್ರೀಡಾ ಸಾಮಗ್ರಿಗಳ ಖರೀದಿ, ವಿದ್ಯುತ್ತೀಕರಣ, ಹೊನಲು ಬೆಳಕು, ಇತ್ಯಾದಿಗಳನ್ನು ಒಳಗೊಂಡಿವೆ.
ತಾಂತ್ರಿಕ ಅನುಮತಿ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಮಾಹಿತಿ ನೀಡಿದರು.
