ವರ್ಕಾಡಿ- ಸ್ಥಳೀಯಾಡಳಿತ ಸಂಸ್ಥೆಗಳನ್ನು ಅವಗಣಿಸುತ್ತಿರುವ ಕೇರಳದ ಎಡರಂಗ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಎಲ್. ಜಿ.ಎಂ.ಎಲ್ ನೀಡಿದ ಕರೆಯಂತೆ ಯುಡಿಎಫ್ ಜನಪ್ರತಿನಿಧಿಗಳು ಮತ್ತು ನಾಯಕರು ವರ್ಕಾಡಿ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾ ಸಂಗಮ ನಡೆಸಿದರು.
ಐದು ತಿಂಗಳುಗಳಿಂದ ಮೊಟಕುಗೊಂಡ ಪೆನ್ಶನ್ ಶೀಘ್ರ ನೀಡಬೇಕು, ಕಟ್ಟಡ ತೆರಿಗೆ, ಪರ್ಮಿಟ್ ಫೀ ಹೆಚ್ಚಳ ಹಿಂದೆಗೆಯಬೇಕು, ಟ್ರೆಶರಿ ನಿಯಂತ್ರಣ ಹಿಂದೆಗೆಯಬೇಕು, ಪಂಚಾಯತ್ ಗಳ ಅಧಿಕಾರ ಮೊಟಕುಗೊಳಿಸುವ ಯತ್ನ ಹಿಂಪಡೆಯಬೇಕು, ತಾತ್ಕಾಲಿಕ ನೇಮಕಾತಿ ಮರೆಯಲ್ಲಿ ಸ್ವಪಕ್ಷೀಯರಿಗೆ ಉದ್ಯೋಗ ನೀಡುವ ಕ್ರಮ ಕೊನೆಗೊಳಿಸಬೇಕು, ಕಾಮಗಾರಿಗಳ ನಿರ್ವಹಣೆಗೆ ಅಡ್ಡಿಯಾದ ತೊಡಕುಗಳನ್ನು ಪರಿಹರಿಸಬೇಕು, ಬಜೆಟ್ ನಲ್ಲಿ ಮೀಸಲಿಟ್ಟ ಫಂಡ್ ಶೀಘ್ರ ನೀಡಬೇಕು,ಲೈಫ್ ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟಿಸಲಾಯಿತು.
ಸಂಗಮದಲ್ಲಿ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಮಜೀದ್ ಬಿ.ಎ,ಇಬ್ರಾಹಿಂ ಧರ್ಮನಗರ, ಸೀತಾ ಡಿ,ಉಮ್ಮರ್ ಬೋರ್ಕಳ, ನೇತಾರರಾದ ಮೊಹಮ್ಮದ್ ಮಜಾಲ್, ಮೊಹಮ್ಮದ್ ಪುತ್ತು ಮುಂತಾದವರು ಉಪಸ್ಥಿತರಿದ್ದರು.
