Breaking Posts

6/trending/recent

Qries
Type Here to Get Search Results !

ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ, ಫೆಬ್ರವರಿ 1 ರಿಂದ 3 ರವರೆಗೆ ವಾರ್ಷಿಕ ಆಧ್ಯಾತ್ಮಿಕ ಸಂಗಮ

 ಕುಂಬಳೆ: ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ, ವಾರ್ಷಿಕ ಆಧ್ಯಾತ್ಮಿಕ ಸಂಗಮ (ಜಲ್ಸಾ: ಸೀರತು ಇಮಾಮ್ ಶಾಫಿ(ರ) ಫೆಬ್ರವರಿ 1 ರಿಂದ 3 ರವರೆಗೆ ಕುಂಬಳೆ ಬದ್ರಿಯಾ ನಗರ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ಅಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ ಎಂದು 
 ಪತ್ರಕರ್ತರ ವೇದಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
 ಧ್ವಜಾರೋಹಣ, ಝಿಯಾರತ್, ಖತ್ಮುಲ್ ಖುರಾನ್, ಮಜ್ಲಿಸುನ್ನೂರ್, ಇಮಾಮ್ ಶಾಫಿ (ರ.ಅ) ಮೌಲಿದ್, ಧಾರ್ಮಿಕ ಪ್ರವಚನ, ಇತ್ತಿಸಾಲ್ ಮತ್ತು ಸಮಾರೋಪ ಸಮಾರಂಭಗಳು, ಪ್ರಮುಖ ಕಾರ್ಯಕ್ರಮಗಳಾಗಿವೆ.
 ಫೆ.1ರಂದು ಬೆಳಗ್ಗೆ 9 ಗಂಟೆಗೆ ಕೋಶಾಧಿಕಾರಿ ಹಾಜಿ ಮುಹಮ್ಮದ್ ಅರಬಿ ಧ್ವಜಾರೋಹಣ ನೆರವೇರಿಸುವರು. ಕೆ.ಕೆ.  ಮಾಹಿನ್ ಮುಸ್ಲಿಯಾರ್ ಝಿಯಾರತ್ ನೇತೃತ್ವ ವಹಿಸಲಿದ್ದಾರೆ.  ಖತ್ಮುಲ್ ಖುರಾನ್ ಎನ್.ಪಿ.ಎಂ ಸೈಯ್ಯದ್ ಝೈನುಲ್ ಆಬಿದೀನ್ ತಂಗಳ್ ಕುನ್ನುಂಗೈ ನೇತೃತ್ವ ವಹಿಸುವರು.
 ಸಂಜೆ 7 ಗಂಟೆಗೆ ಕೆ.ಎಸ್.  ಅಲಿ ತಂಗಳ್ ಕುಂಬೋಳ್ ಉದ್ಘಾಟಿಸುವರು. ಎಂ.ಪಿ.ಮುಹಮ್ಮದ್ ಸಅದಿ ಅಧ್ಯಕ್ಷತೆ ವಹಿಸುವರು. ಮುಹಮ್ಮದ್ ಮದನಿ ತಂಗಳ್ ಮೊಗ್ರಾಲ್ ಪ್ರಾರ್ಥನೆಗೈಯ್ಯುವರು. ಅಬೂಬಕ್ಕರ್ ಸಾಲೂದ್ ನಿಝಾಮಿ ಸ್ವಾಗತಿಸುವರು.  ಎಂ.ಎಸ್.  ತಂಗಳ್ ಓಲಮುಂಡ, ಅಬ್ದುಲ್ ಸಲಾಂ ದಾರಿಮಿ ಆಲಂಪಾಡಿ ಮಾತನಾಡಲಿದ್ದಾರೆ.  ರಾತ್ರಿ 8ಕ್ಕೆ ಬುರ್ದಾ ಮಜ್ಲಿಸ್, 8.30ಕ್ಕೆ ಅಶ್ರಫ್ ರಹ್ಮಾನಿ ಚೌಕಿ ಪ್ರಭಾಷಣ ನಡೆಸಲಿದ್ದು, ಸಫ್ವಾನ್ ತಂಗಳ್ ಏಝ್ಮಲ ಮಜ್ಲಿಸುನ್ನೂರು ನೇತೃತ್ವ ವಹಿಸಲಿದ್ದಾರೆ.
 ಫೆ.2ರಂದು ಸಂಜೆ 7 ಗಂಟೆಗೆ ಇಮಾಮ್ ಶಾಫಿ ಮೌಲಿದ್, ರಾತೀಬ್ ಅಸ್ಮಾವುಲ್ ಹುಸ್ನಾಗೆ ಇಬ್ರಾಹಿಂ ಬಾದುಶ ತಂಗಳ್ ಆನಕ್ಕಲ್ ಅವರು ನೇತೃತ್ವ ನೀಡಲಿದ್ದಾರೆ.  ಅನಸ್ ಬಾಖವಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹಾಗೆಯೇ ಅಬ್ದುಲ್ ರಹಿಮಾನ್ ಹೈತಮಿ ಮತ್ತು ಅಲಿ ದಾರಿಮಿ ಕಿನ್ಯ ಮಾತನಾಡಲಿದ್ದಾರೆ.
 ಫೆಬ್ರವರಿ 3 ರಂದು ಬೆಳಿಗ್ಗೆ 10 ಗಂಟೆಗೆ 'ಇತ್ತಿಸಾಲ್' ಕುಟುಂಬ ಸಮ್ಮಿಲನ,
 ಸಮಸ್ತ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಉದ್ಘಾಟಿಸುವರು.
 ಯು.ಎಂ.ಅಬ್ದುಲ್ ರಹ್ಮಾನ್ ಮೌಲವಿ ಪ್ರಾರ್ಥನೆ ನಡೆಸುವರು.
 ಹಾಜಿ ಎಂ.ಎಂ.ಇಝ್ಝುದ್ದೀನ್ ಅಧ್ಯಕ್ಷತೆ ವಹಿಸುವರು.  ಎ.ಕೆ.ಎಂ. ಅಶ್ರಫ್ MLA ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
 ಅಬ್ದುಲ್ ಸಲಾಂ ಬಾಖವಿ ವಡಕ್ಕೇಕಾಡ್ ಪ್ರಭಾಷಣ ನಡೆಸುವರು. ಅನ್ವರ್ ಅಲಿ ಹುದವಿ, ಕೆ.ಎಲ್.  ಅಬ್ದುಲ್ ಖಾದಿರ್ ಅಲ್-ಖಾಸಿಮಿ ಮಾತನಾಡಲಿದ್ದಾರೆ. ಶೈಖುನಾ ಬಿ.ಕೆ.  ಅಬ್ದುಲ್ ಖಾದಿರ್ ಅಲ್-ಖಾಸಿಮಿ ಸಮಾರೋಪ ಪ್ರಾರ್ಥನೆಯನ್ನು ನೆರವೇರಿಸುವರು.
 ಸುದ್ದಿಗೋಷ್ಠಿಯಲ್ಲಿ ಚೆಯರ್ಮಾನ್ ಎಂ.ಎಂ.ಇಝ್ಝುದ್ದೀನ್ ಹಾಜಿ, ಪ್ರಾಂಶುಪಾಲ ಶೈಖುನಾ ಬಿ.ಕೆ.  ಅಬ್ದುಲ್ ಖಾದರ್ ಮುಸ್ಲಿಯಾರ್, ಕೆ.ಎಲ್. ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಅಬೂಬಕ್ಕರ್ ಸಾಲೂದ್ ನಿಝಾಮಿ, ಪಿ.ವಿ. ಝುಬೈರ್ ನಿಝಾಮಿ, ಅಬ್ದುಲ್ ರಹಿಮಾನ್ ಹೈತಮಿ, ಇಬ್ರಾಹಿಂ ಖಲೀಲ್ ಅಶ್ಶಾಫಿ ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.