ವರ್ಕಾಡಿ: ಮಂಜೇಶ್ವರ ಶಾಸಕ ಎ.ಕೆ. ಎಂ ಅಶ್ರಫ್ ಅವರ ADS ಫಂಡ್20 ಲಕ್ಷ ವಿನಿಯೋಗಿಸಿ ನಿರ್ಮಿಸಲಾದ ವರ್ಕಾಡಿ ಪಂಚಾಯತ್ 2 ನೇ ವಾರ್ಡ್ ಕೆದುಂಬಾಡಿ ಬಬ್ಬರಕೋಡಿ ರಸ್ತೆ ಕಾಂಕ್ರೀಟೀಕರಣವನ್ನು ಶಾಸಕ ಎ.ಕೆ.ಎಂ ಆಶ್ರಫ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ ಹಾಗೂ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ರಝಾಕ್ ಕೆದುಂಬಾಡಿ ಹಾಗೂ ಮೂಸ ಕೆದುಂಬಾಡಿ, ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಹಮೂದ್ ಕೆದುಂಬಾಡಿ, ಮುತ್ತಲಿಬ್, ನಾರಾಯಣ ಪೂಜಾರಿ, ಪ್ರವೀಣ ಡಿ ಸೋಜ ಹಾಗೂ ಹನೀಫ್ ಬಿ.ಎಂ ಇನ್ನಿತರ ಊರವರು ಭಾಗವಹಿಸಿದರು.
